Onderwys: skool, studie en leer, van klaskamers tot lewenslange nuuskierigheid. Lees en luister in Kannada op jou vlak, van Beginner tot Meesterskap, met klank, vertaling en vasvrae.
OnderwysGevorderd18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಡಾ. ಕೆ. ಶಿವರಾಮ ಕಾರಂತ ಬಡಾವಣೆಗಾಗಿ ಭೂಮಿ ನೀಡಿದ ರೈತರು ಮತ್ತು ಭೂಮಾಲೀಕರಿಗೆ ಪರಿಹಾರ ವಿತರಣೆ ಆರಂಭವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ದೇಶದಲ್ಲೇ ಅತಿ ಹೆಚ್ಚು ಎನ್ನಲಾದ ಶೇ.40ರಷ್ಟು ಅಭಿವೃದ್ಧಿಪಡಿಸಿದ ಭೂಮಿ ಸೇರಿದಂತೆ ಹಲವು ಪರಿಹಾರ ಆಯ್ಕೆಗಳನ್ನು ಘೋಷಿಸಿದ್ದಾರೆ.
OnderwysBeginner01 ಸೆಪ್ಟೆಂಬರ್ 2026 ಮಂಗಳ ವಾರ: ಮೇಷ ರಾಶಿಯಿಂದ ಮಕರ ರಾಶಿಯವರೆಗೆ ಇಂದು ನಿಮಗೆ ಹೇಗಿರುತ್ತದೆ ಮತ್ತು ಯಾವ ಕ್ಷೇತ್ರಗಳಲ್ಲಿ ನೀವು ಶುಭ ಚಿಹ್ನೆಗಳನ್ನು ಪಡೆಯಬಹುದು ಎಂಬುದನ್ನು ತಿಳಿಯಿರಿ.
OnderwysBeginnerಶಿವಮೊಗ್ಗ : ಕಸ್ತೂರಿ ರಂಗನ್ ವರದಿ ಸಂಬಂಧ ಮುಖ್ಯಮಂತ್ರಿಯವರು ಇತ್ತೀಚೆಗೆ ಶಾಸಕರು, ಸಚಿವರ ಸಭೆ ಕರೆದಿದ್ದರು. ಸಭೆಯಲ್ಲಿ ವಿಶೇಷ ಅಧಿವೇಶನ ಕರೆದು, ನಿರ್ಣಯ ಕಳಿಸುವ ತೀರ್ಮಾನವಾಗಿದೆ. ಸೆ.3ರಂದು ಕ್ಯಾಬಿನೆಟ್ ಇದೆ. ಅಲ್ಲೂ ಚರ್ಚೆ ಮಾಡಿ ಮುಂದೆ ಕೊಂಡೊಯ್ಯುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಗೆ ಮೊದಲಿಂದಲೂ ವಿರೋಧಿಸಲಾಗುತ್ತಿದೆ. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ವಿರೋಧಿಸಲಾಗಿತ್ತು. ಆಗಲೇ ಇದನ್ನು ತಿರಸ್ಕರಿಸಿ, ರಾಜ್ಯ ಸರಕಾರ ನಿರ್ಣಯ ಕೈಗೊಂಡು ಕಳುಹಿಸಿತ್ತು ಎಂದರು. ಈ ಹಿಂದೆ ವಿರೋಧ ಮಾಡಿದಾಗ ಸರಕಾರದ ಜತೆ ಕೇಂದ್ರ ಚರ್ಚೆ ಮಾಡಬೇಕಿತ್ತು. ಸಂಸದರು ಇಲ್ಲಿ ಬಂದು ನಮ್ಮದೇನಿಲ್ಲ ಎಂದು ಮನವಿ ಕೊಡ್ತಾರೆ. ಆದರೆ, ಕೇಂದ್ರ ಸರಕಾರವೇನು ನಮ್ಮದಾ..? ನಮ್ಮದಾಗಿದ್ರೆ ಎರಡು ನಿಮಿಷದಲ್ಲಿ ಈ ವರದಿಯನ್ನು ತಿರಸ್ಕಾರ ಮಾಡಿ ಬಿಸಾಕುತ್ತಿದ್ದೆವು. ಇಲ್ಲಿನ ಸಂಸದರು ಜನರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಅತೀ ಹೆಚ್ಚು ಬಿಜೆಪಿ ಸಂಸದರಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಹೆಚ್ಚು ತೊಂದರೆಯಾಗುತ್ತಿದೆ. ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಕಾಗೇರಿಯವರು ಇಲ್ಲಿ ಬಂದು ಪುಗ್ಸಟ್ಟೆ ಹೇಳಿಕೆ ಕೊಡುತ್ತಾರೆ. ಈ ಬಗ್ಗೆ ಸಂಸತ್ನಲ್ಲಿ ಯಾಕೆ ಚರ್ಚೆ ಮಾಡಲಿಲ್ಲ?. ಸಾಲದಕ್ಕೆ ರಾಘವೇಂದ್ರ ಅವರ ತಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆಗ ಯಾಕೆ ಚರ್ಚೆ ಮಾಡಲಿಲ್ಲ? ಆಗ ಏನೂ ಮಾಡದೆ ಈಗ ಬಿಜೆಪಿ ರಾಜ್ಯಾಧ್ಯಕ್ಷರು ನಮಗೆ ಮನವಿ ಕೊಡುತ್ತಾರೆ. ಅತ್ತ ಸಂಸದ ರಾಘವೇಂದ್ರ ಅವರೂ ಮನವಿ ಮಾಡುತ್ತಾರೆ. ರಾಜಕೀ ಯವಾಗಿ ಹೀಗೇ ಬಿಡುವುದಕ್ಕೆ ಆಗುವುದಿಲ್ಲ. ಕೇಂದ್ರವನ್ನು ನಾವು ಟೀಕೆ ಮಾಡಲೇ ಬೇಕು. ವರದಿ ಜಾರಿಯಾದರೆ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ವರದಿಯನ್ನು ವಿರೋಧಿಸಿ ಸರಕಾರದಿಂದ ವಿರೋಧ ದಾಖಲಿಸುತ್ತೇವೆ ಎಂದು ತಿಳಿಸಿದರು. ಬಿಜೆಪಿ ವಿರುದ್ಧ ವಾಗ್ದಾಳಿ ಸಚಿವ ಬಸವರಾಜ ರಾಯರೆಡ್ಡಿ ಇಸ್ಲಾಮ್ ಧರ್ಮ ಶ್ರೇಷ್ಠ ಎಂದು ಅವರ ಅಭಿಪ್ರಾಯವನ್ನು ಹೇಳಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೂ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು ಅಂದಿದ್ದರು. ದೇವೇಗೌಡರು ಬಿಜೆಪಿ ಜೊತೆ ಸೇರಿದ ತಕ್ಷಣ ಪವಿತ್ರರಾಗಿ ಬಿಡುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ಇದೇ ದೇವೇಗೌಡ ಅವರು ಈ ಹಿಂದೆ ಮೋದಿಯವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಅಂದಿದ್ದರು. ಈಗ ಪಕ್ಕದಲ್ಲೇ ಹಲ್ಲು ಕಿಸ್ಕೊಂಡು ಕುಳಿತುಕೊಳ್ಳುತ್ತಾರೆ ಎಂದು ಕುಟುಕಿದರು.
Onderwys
ರಾಜ್ ಮತ್ತು ದಿವ್ಯ ಅವರು ನಿಜವಾದ ಕಲಿಕೆಯಲ್ಲಿ ವೈಫಲ್ಯವು ವಹಿಸುವ ವಿರೋಧಾಭಾಸದ ಪಾತ್ರವನ್ನು ಅನ್ವೇಷಿಸುತ್ತಾರೆ. ಅರಿವಿನ ಸಂಶೋಧನೆ, ವೈಯಕ್ತಿಕ ಹಿನ್ನಡೆಗಳು ಮತ್ತು ತಪ್ಪುಗಳ ಬಗೆಗಿನ ಸಾಂಸ್ಕೃತಿಕ ಮನೋಭಾವಗಳನ್ನು ಆಧರಿಸಿ, ಶಿಕ್ಷಣ ವ್ಯವಸ್ಥೆಗಳು ಏಕೆ ವೈಫಲ್ಯವನ್ನು ಶಿಕ್ಷಕನ ಅತ್ಯಂತ ವಿಶ್ವಾಸಾರ್ಹ ಸಾಧನವಾಗಿ ಬಳಸುವ ಬದಲು ಅದಕ್ಕೆ ಶಿಕ್ಷೆ ವಿಧಿಸುತ್ತವೆ ಎಂಬುದನ್ನು ಅವರು ಚರ್ಚಿಸುತ್ತಾರೆ.
Onderwys
ರಾಜ್ ಮತ್ತು ದಿವ್ಯ ವಿಶ್ವವಿದ್ಯಾಲಯದ ಪದವಿಯ ಹೆಚ್ಚುತ್ತಿರುವ ವೆಚ್ಚ ಮತ್ತು ವಿದ್ಯಾರ್ಥಿ ಸಾಲದ ಹೊರೆಯನ್ನು ಪರಿಶೀಲಿಸುತ್ತಾರೆ. ಸಾಂಪ್ರದಾಯಿಕ ಪದವಿಯು ಇನ್ನೂ ಆರ್ಥಿಕ ಅಪಾಯಕ್ಕೆ ಯೋಗ್ಯವೇ ಮತ್ತು ಯುವಜನತೆಗೆ ಯಾವ ಪರ್ಯಾಯಗಳು ಲಭ್ಯವಿವೆ ಎಂಬುದನ್ನು ಅವರು ಚರ್ಚಿಸುತ್ತಾರೆ.
Onderwys
ರಾಜ್ ಮತ್ತು ದಿವ್ಯ ತಮ್ಮ ಜೀವನವನ್ನು ರೂಪಿಸಿದ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಒಬ್ಬ ಶಿಕ್ಷಕರು ನಿಜವಾಗಿಯೂ ಪರಿವರ್ತನಾಕಾರಿಯಾಗಿರಲು ಏನು ಬೇಕು ಎಂಬುದನ್ನು ಚರ್ಚಿಸುತ್ತಾರೆ. ಈ ಸಂಭಾಷಣೆಯು ಜೀವಮಾನದ ಕಲಿಕೆ, ಕುತೂಹಲ ಮತ್ತು ವಯಸ್ಸಾದಂತೆ ಕಲಿಕೆಯ ಆಸಕ್ತಿಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬ ವಿಷಯಗಳತ್ತ ವಿಸ್ತಾರವಾಗುತ್ತದೆ.
Gevorderd9:10Darshan Gowda
Beginner20:20Needs Of Public
Elementêr6:30Needs Of Public