Car Diplomacy: ಪುಟಿನ್ ಜೊತೆ ಮತ್ತೆ ಒಂದೇ ಕಾರಲ್ಲಿ ಪ್ರಧಾನಿ ಮೋದಿ ಸವಾರಿ! SCO ಶೃಂಗಸಭೆಯಲ್ಲಿ ಮೋದಿ-ಪುಟಿನ್ ದೋಸ್ತಿಯ ಹಿಸ್ಟರಿ ರಿಪೀಟ್
ಕಿರ್ಗಿಸ್ತಾನ್ನ ಬಿಷ್ಕೆಕ್ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಯಾಗಿ ಹಿತವಾಗಿ ಎಂಬಂತೆ ಮತ್ತೆ ಒಂದೇ ಕಾರಲ್ಲಿ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಒಟ್ಟಾಗಿ ತೆರಳಿದ್ದಾರೆ. ಸದ್ಯ ಈ ದೋಸ್ತಿಗಳ ಕಾರ್ ಡಿಪ್ಲೋಮಸಿ ಕ್ಷಣದ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೂ ಮೊದಲು ಉಭಯ ನಾಯಕರು ದ್ವಿಪಕ್ಷೀಯ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಹಾಗಾದ್ರೆ ಹೇಗಿತ್ತು ಮೋದಿ-ಪುಟಿನ್ ಕಾರು ರಾಜತಾಂತ್ರಿಕತೆ, ದ್ವಿಪಕ್ಷೀಯ ಮಾತುಕತೆಯಲ್ಲಿ ದೋಸ್ತಿಗಳ ಚರ್ಚೆ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ...