ಇಂದಿನಿಂದ(ಸೆ.1) ಲಿಂಗಸುಗೂರಿನಿಂದ BJP 'ಬಳ್ಳಾರಿ ಚಲೋ' ಪಾದಯಾತ್ರೆ ಶುರು! ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಕಮಲ ಪಡೆ ರಣಕಹಳೆ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಯ ರಣಕಹಳೆ ಮೊಳಗಿಸಿರುವ ಪ್ರತಿಪಕ್ಷ ಬಿಜೆಪಿ ಇದೀಗ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೆ.1ರಿಂದ 'ಬಳ್ಳಾರಿ ಚಲೋ' ಪಾದಯಾತ್ರೆಯನ್ನು ಆರಂಭಿಸಲಿದೆ. ಲಿಂಗಸುಗೂರಿನಿಂದ ಪ್ರಾರಂಭವಾಗುವ ಈ 10 ದಿನಗಳ ಸುದೀರ್ಘ ಪಾದಯಾತ್ರೆಯು ಮಸ್ಕಿ, ಸಿಂಧನೂರು, ಗಂಗಾವತಿ, ಕಂಪ್ಲಿ ಮಾರ್ಗವಾಗಿ ಬಳ್ಳಾರಿಯನ್ನು ತಲುಪಲಿದೆ. ವಾಲ್ಮೀಕಿ ನಿಗಮದ ಹಗರಣದ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಹೊರತಾಗಿಯೂ, ಎಸ್ಸಿಪಿ-ಟಿಎಸ್ಪಿ ನಿಧಿ ದುರ್ಬಳಕೆ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ತಡೆ, ಗೃಹಲಕ್ಷ್ಮಿ ಹಣ ಬಿಡುಗಡೆಯಾಗದಿರುವುದು ಮತ್ತು ತುಂಗಭದ್ರಾ ಜಲಾಶಯದ ಹೂಳು ತೆರವುಗೊಳಿಸದಿರುವುದನ್ನು ಮುಖ್ಯ ಅಜೆಂಡಾವಾಗಿಸಿಕೊಂಡು ಬಿಜೆಪಿ ನಾಯಕರು ಬೃಹತ್ ಹೋರಾಟಕ್ಕೆ ಧುಮುಕಿದ್ದಾರೆ.