ಕುಮಟಾ, ಹೊನ್ನಾವರದಲ್ಲಿ ಸೆ.2ರಂದು ವಿದ್ಯುತ್ ವ್ಯತ್ಯಯ
ಕುಮಟಾ: ಗೋಕರ್ಣ ಮಾರ್ಗದಲ್ಲಿ ವಿದ್ಯುತ್ ತಂತಿಗಳಿಗೆ ತಗಲುವ ಮರದ ಟೊಂಗೆಗಳನ್ನು ಕತ್ತರಿಸುವ ಕಾರ್ಯ ಇರುವುದರಿಂದ ಸೆ.2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ ತಾಲ್ಲೂಕಿನ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರ, ಗಂಗಾವಳಿ, ಓಂಬಿಚ್, ಮಿರ್ಜಾನ್ ಕೋಡ್ಕಣಿ, ನಾಗೂರ ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ, ದಿವಗಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಎಇಇ ಕಾರ್ಯಾಲಯ ಪ್ರಕಟಣೆ ತಿಳಿಸಿದೆ.